ಸೌಂದರ್ಯವೆಂಬುದು ವರದಾನವಿದ್ದಂತೆ. ಅದು ಬಾಹ್ಯ ಮತ್ತು ಆಂತರಿಕ ಎಂಬ ಭಿನ್ನತೆಯನ್ನು ಹೊಂದಿರುವುದಿಲ್ಲ. ನಾವು ಆಂತರಿಕವಾಗಿ ಸ್ವಚ್ಛವಾಗಿದ್ದಷ್ಟೂ ಬಾಹ್ಯ ರೀತಿಯಲ್ಲೂ ಹಾಗೆಯೇ ಇರುತ್ತೇವೆ. ಸೌಂದರ್ಯದ ವಿಷಯದಲ್ಲಿ ಸ್ವಚ್ಛತೆಗೆ ಅದರದ್ದೇ ಆದ ಮಹತ್ವವಿದೆ. ಎಷ್ಟೇ ಅಲಂಕಾರಗಳನ್ನು ಮಾಡಿಕೊಂಡಿದ್ದರೂ ದೇಹದಿಂದ ಬರುವ ಬೆವರಿನ ವಾಸನೆ, ಬಾಯಿಯ ದುರ್ಗಂಧ ಒಂದು ರೀತಿಯ ಕೊಳಕನ್ನು ನಮ್ಮ ಮೇಲೆ ಉಂಟುಮಾಡಿಬಿಡುತ್ತದೆ. ಒಳಗೆ ಟೊಳ್ಳು ಹೊರಗೆ ಡಂಬಾಚಾರ ಎಂಬಂತೆ ನಮ್ಮ ಪರಿಸ್ಥಿತಿಯಾಗುತ್ತದೆ. ದೇಹದ ಸ್ವಚ್ಛತೆ ಎಂಬುದು ಆರೋಗ್ಯದ ಮೇಲೂ ಪರಿಣಾಮವನ್ನು ಬೀರುವುದರಿಂದ ಇದಕ್ಕೆ ಹೆಚ್ಚಿನ ಪ್ರಧಾನ್ಯತೆಯನ್ನು ನೀಡಬೇಕು. […]
↧