ಸಿಯೋಲ್: ಉತ್ತರ ಕೊರಿಯಾ ವಿರುದ್ಧ ವಿಶ್ವಸಂಸ್ಥೆ ಕಠಿಣ ಕ್ರಮಗಳನ್ನು ಹೇರಿದ್ದ ಹೊರತಾಗಿಯೂ ಅಣ್ವಸ್ತ್ರಗಳ ಯುದ್ಧಕ್ಕೆ ಸಿದ್ಧರಾಗುವಂತೆ ಅಧ್ಯಕ್ಷ ಕಿಮ್ ಜಾಂಗ್ ಉನ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ. “ಕೊರಿಯನ್ ದ್ವೀಪ ಹೆಚ್ಚು ಅಪಾಯದ ಪ್ರದೇಶವಾಗಿದೆ. ಹೀಗಾಗಿ ಮುಂಜಾಗರೂಕತಾ ಕ್ರಮವಾಗಿ ಈ ಪ್ರದೇಶಕ್ಕೆ ಸೇನೆಯನ್ನು ರವಾನಿಸಬೇಕಾಗಿದೆ. ಈ ಮೂಲಕ ಸಂಭಾವ್ಯ ದಾಳಿ ತಪ್ಪಿಸಬಹುದಾಗಿದೆ’’ ಎಂದು ಉನ್ ಎಚ್ಚರಿಸಿದ್ದಾರೆ. ಇತ್ತೀಚೆಗಷ್ಟೇ ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿದ್ದಾಗಿ ವಿಶ್ವವನ್ನು ಬೆಚ್ಚಿ ಬೀಳಿಸಿತ್ತು. ಈ ಬಗ್ಗೆ ಅಮೆರಿಕದ ರಕ್ಷಣಾ […]
↧