ಗಾಜಿನ ಈ ವೈಚಿತ್ರ ವರ್ಣಿಸುವುದರಲ್ಲಿ ವಿಜ್ಞಾನಿಗಳಲ್ಲಿ ಒಮ್ಮತವಿಲ್ಲ. ಅಣುಗಳ ಏರ್ಪಾಟಿನಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಗಳಿಂದ ಗಾಜು ರೂಪುಗೊಳ್ಳುತ್ತದೆ ಎನ್ನುತಾರೆ ಒಂದು ಗುಂಪಿನ ವಿಜ್ಞಾನಿಗಳು. ಅಣುಗಳ ಕ್ರಿಯಾಶೀಲತೆಯೇ ಗಾಜಿನ ರೂಪುಗೊಳ್ಳುವಿಕೆಗೆ ಮುಖ್ಯ ಕಾರಣ ಹಾಗು ಅಣುಗಳ ಏರ್ಪಾಟಿನಲ್ಲಿ ಯಾವುದೇ ಬದಲಾವಣೆಗಳು ಇರಲಾರದು ಎನ್ನುತ್ತಾರೆ ಇನ್ನೊಂದು ಗುಂಪಿನವರು. ಗಾಜು ಬಹೂಪಯೋಗಿ. ಅದು ನಮ್ಮ ಮನೆಗಳನ್ನು ಬೆಳಗಿಸುತ್ತದೆ, ನಮ್ಮ ಕಣ್ಣುಗಳ ದೋಷವನ್ನು ಸರಿದೂಗಿಸುತ್ತದೆ, ಸುಂದರವಾದ ಊಟದ ಸಲಕರಣೆಗಳನ್ನು ಒದಗಿಸುತ್ತದೆ ಮತ್ತು ಅದಿಲ್ಲದ ಜಂಗಮ ದೂರವಾಣಿಯಿಲ್ಲ (ಮೊಬೈಲ್). ಒಂದೆಡೆ ಅದು ನಿಮ್ಮ ಚತುರ […]
↧