ಮುರುಗಲು ಅಥವಾ ಪುನರ್ಪುಳಿ ಹಣ್ಣು ಹೆಚ್ಚಿನವರಿಗೆ ಗೊತ್ತು. ಆದರೆ ಇದೇ ಗಾರ್ಸೀನಿಯಾ ಕುಟುಂಬದಲ್ಲಿ ನಮಗೆ ಪರಿಚಯವಿಲ್ಲದ ಇನ್ನೊಂದು ಅದ್ಭುತ ಹಣ್ಣಿದೆ. ಅದೇ ಅಚಾಚಾಯ್ರು. ಪೂರ್ವ ಬೊಲಿವಿಯಾದ ಕಾಡುಗಳಲ್ಲಿ ಅಚಾಚಾಯ್ರು ನೈಸರ್ಗಿಕವಾಗಿ ಬೆಳೆಯುತ್ತದೆ. ಇದರ ಶಾಸ್ತ್ರೀಯ ಹೆಸರು ಗಾರ್ಸೀನಿಯಾ ಹ್ಯುಮಿಲಿಸ್. ಕೆಲವರು ‘ಬೊಲಿವಿಯನ್ ಮ್ಯಾಂಗೋಸ್ಟೀನ್’ ಎನ್ನುತ್ತಾರೆ. ನಿಜ ಹೆಸರು ಅಚಾಚಾಯ್ರು. ಉಚ್ಚರಿಸಲು ಕಷ್ಟ ಎಂದು ಇದನ್ನು ಚುಟುಕಾಗಿಸಿದ್ದು ಆಸ್ಟ್ರೇಲಿಯನ್ನರು. ಹಣ್ಣನ್ನು ಜನಪ್ರಿಯಗೊಳಿಸಿದ್ದೂ ಅವರೇ. ಅಲ್ಲಿರುವ ‘ಅಚಾಚಾ’ ಕಂಪೆನಿ ಆನ್‌ಲೈನ್ ಸೇಲ್ ಮೂಲಕ ಈ ಹಣ್ಣುಗಳನ್ನು ಗ್ರಾಹಕರ ಮನೆಗೇ ತಲುಪಿಸುತ್ತಿದೆ. […]
↧