ಅಪ್ಗಾನಿಸ್ತಾನ: ಪಾಕಿಸ್ತಾನದ ಪ೦ಜಾಬ್ ಪ್ರಾ೦ತ್ಯದ ರಾಜಧಾನಿ ಲಾಹೋರ್ನಲ್ಲಿ ಭಾನುವಾರ ಆತ್ಮಾಹುತಿ ದಾಳಿ ನಡೆದ ಬೆನ್ನಲ್ಲೇ ಆಪ್ಘನ್ ಸಂಸತ್ ಮೇಲೆ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ. ಘಟನೆಯಿಂದ ಯಾವುದೇ ರೀತಿಯ ಸಾವು-ನೋವು ಸಂಭವಿಸಿರುವುದು ವರದಿಯಾಗಿಲ್ಲ. ಕಳೆದ ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಉದ್ಘಾಟಿಸಿದ್ದರು. ಸುಮಾರು 200 ಶತಕೋಟಿ ಡಾಲರ್ ವೆಚ್ಚದಲ್ಲಿ ಈ ಕಚೇರಿ ನಿರ್ಮಾಣವಾಗಿತ್ತು. ಜೂನ್ 2015ರಲ್ಲಿ ತಾಲಿಬಾನ್ ಉಗ್ರರಿಂದ ಸಂಸತ್ ಮೇಲೆ ಆತ್ಮಾಹುತಿ ದಾಳಿ ನಡೆದಿತ್ತು.
↧