ನವದೆಹಲಿ: ಆತ್ಮವಿಶ್ವಾಸದ ಉತ್ತುಂಗದಲ್ಲಿ ನಲಿದಾಡುತ್ತಿರುವ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ಗಳಾದ ಮಿಚೆಲ್ ಸ್ಯಾಂಟನರ್ ಮತ್ತು ಇಶ್ ಸೋಧಿ ಫಿರೋಜ್ ಶಾ ಕೋಟ್ಲಾ ಅಂಗಳದಲ್ಲಿ ತಮ್ಮ ಕೈಚಳಕ ಮೆರೆಯಲು ಸಜ್ಜಾಗಿದ್ದಾರೆ. ಬುಧವಾರ ಇಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ–20 ಚಾಂಪಿಯನ್ಷಿಪ್ ಟೂರ್ನಿಯ ಮೊದಲ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿರುವ ಇಂಗ್ಲೆಂಡ್ ತಂಡದ ಘಟಾನುಘಟಿ ಬ್ಯಾಟ್ಸ್ಮನ್ಗಳಿಗೆ ಬಿಸಿ ಮುಟ್ಟಿಸಲು ಕಿವೀಸ್ ಸ್ಪಿನ್ನರ್ಗಳು ಸಿದ್ಧವಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಗಳಿಸಿರುವ ಎಡಗೈ ಸ್ಪಿನ್ನರ್ ಮಿಷೆಲ್ ಸ್ಯಾಂಟನರ್ ಮತ್ತು ಲೆಗ್ಸ್ಪಿನ್ನರ್ ಇಶ್ ಸೋಧಿ 8 ವಿಕೆಟ್ಗಳನ್ನು ತಮ್ಮ ಬುಟ್ಟಿಗೆ […]
↧