ವಾಷಿಂಗ್ಟನ್: ತಾಯಿಯ ಪ್ರೀತಿ ಹಾಗೂ ಮಮತೆ ಹೆಚ್ಚಾದಂತೆ ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ ಎಂದು ಅಧ್ಯಾಯನವೊಂದು ಹೇಳಿದೆ. ವಾಷಿಂಗ್ಟನ್ ವಿಶ್ವವಿದ್ಯಾಲಯವೊಂದು ನಡೆಸಿದ್ದ ಸಂಶೋಧನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ವಿಶ್ವವಿದ್ಯಾಲಯ ನಡೆಸಿದ್ದ ಸಂಶೋಧನೆಯಲ್ಲಿ ಸುಮಾರು 127 ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಇದರಂತೆ ಎಲ್ಲಾ ಮಕ್ಕಳ ಮಿದುಳನ್ನು ಸ್ಕ್ಯಾನಿಂಗ್ ಮಾಡಿ ಪರೀಕ್ಷೆಗೊಳಪಡಿಸಲಾಗಿದೆ. ಮಕ್ಕಳನ್ನು ಅವಲೋಕನದಲ್ಲಿರಿಸಿದ್ದ ಸಂಶೋಧಕರು ಮಕ್ಕಳಿಗೆ ಆಟವೊಂದನ್ನು ನೀಡಿದ್ದಾರೆ. ತಾಯಿಯ ಮಮತೆ ಹಾಗೂ ಪ್ರೀತಿಯನ್ನು ಹೆಚ್ಚಾಗಿ ಪಡೆದ ಮಕ್ಕಳು ತಮ್ಮ ಟಾಸ್ಕ್ ನ್ನು ವೇಗವಾಗಿ ಪೂರ್ಣಗೊಳಿಸಿದ್ದಾರೆ. ತಾಯಿಯ ಪ್ರೀತಿಯಲ್ಲಿ […]
↧