ರಾಗಿ ಮುದ್ದೆ ಉಂಡವ ಬೆಟ್ಟ ಕೀಳುವಷ್ಟು ಶಕ್ತಿ ಹೊಂದಿರುತ್ತಾನೆ. ಮುದ್ದೆ ತಿಂದರೆ ಯಾವ ರೋಗವು ಹತ್ತಿರ ಸುಳಿಯದು. ರಾಗಿ ಮುದ್ದೆ ಬಗ್ಗೆ ಹತ್ತು ಹಲವು ವ್ಯಾಖ್ಯಾನಗಳಿವೆ. ರಾಗಿಯ ಮಹತ್ವವನ್ನು ದಾಸರು ವರ್ಣಿಸಿದ್ದಾರೆ. ರಾಗಿಯಲ್ಲಿ ಎಷ್ಟು ವಿಧಗಳಿವೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಒಂದು, ಎರಡು, ಮೂರು, ನಾಲ್ಕು… ಬರೋಬ್ಬರಿ 53 ತಳಿಗಳ ರಾಗಿ ಇವೆ. ರಾಗಿಯಲ್ಲೂ ಇಷ್ಟೊಂದು ಬಗೆಯೇ? ಅವುಗಳನ್ನು ನೋಡಬೇಕೇ ಹಾಗಾದರೆ ಸಾಂಸ್ಕೃತಿಕ ನಗರಿ ಬೋಗಾದಿಯಲ್ಲಿರುವ ಮಾತಾ ಅಮೃತಾನಂದಮಯಿರವರ ಅಮೃತ ವಿದ್ಯಾಲಯ ಶಾಲೆಗೆ ಭೇಟಿ ನೀಡಬೇಕು. […]
↧