ವಾಷಿಂಗ್ಟನ್ : ಸಮಸ್ತ ಜೀವ ಸಂಕುಲಕ್ಕೆ ನೆಲೆಯಾಗಿರುವ ನಾವಿರುವ ಭೂಮಿಯನ್ನೇ ಹೋಲುವ ಇನ್ನೊಂದು ಭೂಮಿ ಈ ಬ್ರಹ್ಮಾಂಡದಲ್ಲಿ ಇದ್ದೀತೇ ಎಂಬ ಕುತೂಹಲ ವಿಜ್ಞಾನಿಗಳನ್ನು ಕಾಡುತ್ತಲೇ ಬಂದಿದೆ. ಅಂತೆಯೇ ಇದೀಗ ಸುಮಾರು 1,200 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ ನಮ್ಮ ಭೂಮಿಯನ್ನೇ ಹೋಲುವ ಇನ್ನೊಂದು ಭೂಮಿ ಇರುವುದನ್ನು ಕ್ಯಾಲಿಫೋರ್ನಿಯಾ – ಲಾಸ್ ಏಂಜಲ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಸಂಶೋಧಕರು ಹೇಳುವಂತೆ ತಾವು ಪತ್ತೆ ಹಚ್ಚಿರುವ ನಮ್ಮ ಭೂಮಿಯಂತಹ ಈ ಗ್ರಹದಲ್ಲಿ ಮೇಲ್ಪದರಲ್ಲೇ ನೀರಿದೆ; ಗುಡ್ಡ ಬೆಟ್ಟ ಪರ್ವತಗಳು ಇವೆ, ಸಾಗರಗಳೂ […]
↧