ಲಂಡನ್ (ಎಪಿ): ಟೆನಿಸ್ ಟೂರ್ನಿಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಮರಿಯಾ ಶರಪೋವಾ ಅವರಿಗೆ ಅಂತರ ರಾಷ್ಟ್ರೀಯ ಟೆನಿಸ್ ಫೆಡರೇಷನ್ ಎರಡು ವರ್ಷ ಅಮಾನತು ಶಿಕ್ಷೆ ಹೇರಿದೆ. 29 ವರ್ಷದ ಶರಪೋವಾ ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಒಂದು, ಫ್ರೆಂಚ್ ಓಪನ್ ಟೂರ್ನಿಯ ಸಿಂಗಲ್ಸ್ನಲ್ಲಿ ಎರಡು ಸಲ ಚಾಂಪಿಯನ್ ಆಗಿದ್ದಾರೆ. 2004ರ ವಿಂಬಲ್ಡನ್ ಮತ್ತು 2006ರ ಅಮೆರಿಕ ಓಪನ್ ಟೂರ್ನಿ ಗಳಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು. ‘ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್ ಸ್ಲಾಮ್ ಟೂರ್ನಿಯ ವೇಳೆ […]
↧