ನ್ಯೂಯಾರ್ಕ್,ಜೂ.10- ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ 21ರ ಹರೆಯದ ಭಾರತೀಯನೊಬ್ಬನಿಗೆ ಇಲ್ಲಿನ ನ್ಯಾಯಾಲಯ 15 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಅಕ್ರಮವಾಗಿ ಶಸ್ತ್ರಾಸ್ತ್ರ ವಹಿವಾಟು ನಡೆಸುತ್ತಿದ್ದ ಶಮಾ ಸುಖ್‌ದೇವ್‌ನನ್ನು ಅಪರಾಧಿ ಎಂದು ನ್ಯಾಯಾಲಯ ಡಿಸೆಂಬರ್‌ನಲ್ಲೇ ತೀರ್ಮಾನಿಸಿತ್ತು. ಶಿಕ್ಷೆ ಇದೀಗ ಪ್ರಕಟವಾಗಿದೆ. 15 ತಿಂಗಳ ಸೆರೆವಾಸದೊಂದಿಗೆ ಮೂರು ಸಾವಿರ ಡಾಲರ್ ದಂಡವನ್ನೂ ವಿಧಿಸಿದ್ದು ,1 5 ತಿಂಗಳ ಕಾರಾಗೃಹ ವಾಸದ ನಂತರ ಎರಡು ವರ್ಷಗಳ ಕಾಲ ಪೊಲೀಸರ ಕಣ್ಗಾವಲಿನಲ್ಲೇ ಇರುವಂತೆಯೂ ಹೇಳಿದೆ. […]
↧