ನವದೆಹಲಿ (ಪಿಟಿಐ): ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಿಂದ ಭಾರತೀಯ ಮೂಲದ ಮಹಿಳೆಯ ಅಪಹರಣವಾಗಿದೆ. ಕಾಬೂಲ್‌ನ ಅಘಾ ಖಾನ್ ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿದ್ದ ಕೋಲ್ಕತ್ತ ಮೂಲದ ಜುದಿತ್ ಡಿಸೋಜಾ (40) ಅವರನ್ನು ಕಾಬೂಲ್‌ನ ತೈಮಾನಿ ಪ್ರದೇಶದಿಂದ ಕಳೆದ ರಾತ್ರಿ ಅಪಹರಿಸಲಾಗಿದೆ. ಅವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ಆಫ್ಘನ್ ಪೊಲೀಸರೊಂದಿಗೆ ಸಂಪರ್ಕದಲ್ಲಿದೆ. ಮಹಿಳೆಯ ಸುರಕ್ಷಿತ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ ಎಂದು ರಾಯಭಾರ ಕಚೇರಿ ಅಧಿಕಾರಿಗಳು ಹೇಳಿದ್ದಾರೆ. ಕೋಲ್ಕತ್ತದಲ್ಲಿರುವ ಮಹಿಳೆಯ ಕುಟುಂಬದೊಂದಿಗೂ ಸಂಪರ್ಕದಲ್ಲಿದ್ದೇವೆ ಎಂದು ಅಧಿಕಾರಿಗಳು […]
↧