ಒರ್ನಾಲ್ಡೊ (ಎಎಫ್ಪಿ): ಫ್ಲೋರಿಡಾದ ಒರ್ನಾಲ್ಡೊದಲ್ಲಿರುವ ಸಲಿಂಗಕಾಮಿಗಳ ನೈಟ್ಕ್ಲಬ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, 20 ಮಂದಿ ಸಾವಿಗೀಡಾಗಿದ್ದಾರೆ. ಒರ್ನಾಲ್ಡೊದಲ್ಲಿರುವ ಪಲ್ಸ್ ಕ್ಲಬ್ನ ಮೇಲೆ ಭಾನುವಾರ ಬೆಳಗ್ಗೆ 11.30 (ಭಾರತೀಯ ಕಾಲಮಾನ) ದಾಳಿ ನಡೆಸಿದ ಆಗಂತುಕರು ಅಲ್ಲಿನ ಜನರನ್ನು ಒತ್ತೆಯಾಳುಗಳನ್ನಾಗಿರಿಸಿದ್ದರು. ಸತತ ಮೂರು ಗಂಟೆಗಳ ಕಾಲ ದುಷ್ಕರ್ಮಿಗಳ ಜತೆ ಕಾದಾಟ ಮಾಡಿದ್ದ ಪೊಲೀಸರು, ಓರ್ವ ಬಂದೂಕುಧಾರಿಯನ್ನು ಹತ್ಯೆಗೈದಿದ್ದಾರೆ ಎಂದು ಬಲ್ಲಮೂಲಗಳು ವರದಿ ಮಾಡಿವೆ. ಆದಾಗ್ಯೂ, ಈ ದಾಳಿ ಹಿಂದೆ ಉಗ್ರರ ಕೈವಾಡವಿದೆ ಎಂದು ಶಂಕಿಸಲಾಗಿದೆ. ಈ ದಾಳಿಯಲ್ಲಿ […]
↧