ಜಿನಿವಾ (ಎಎಫ್‌ಪಿ): ನಿರಾಶ್ರಿತರ ಬಿಕ್ಕಟ್ಟು ತೀವ್ರ ಪ್ರಮಾಣದಲ್ಲಿ ಎದುರಾಗಿರುವುದರಿಂದ ಮುಂದಿನ ವರ್ಷದಲ್ಲಿ ತುರ್ತಾಗಿ 1.7 ಲಕ್ಷದಷ್ಟು ಜನರಿಗೆ ಪುರ್ನವಸತಿ ಕಲ್ಪಿಸಲು ವಿಶ್ವಸಂಸ್ಥೆಯು ತೀರ್ಮಾನಿಸಿದೆ. ಪ್ರಸಕ್ತ ವರ್ಷಕ್ಕೆ ಹೋಲಿಸಿದರೆ ನಿರಾಶ್ರಿತ ಸಂಖ್ಯೆಯಲ್ಲಿ ಮುಂದಿನ ವರ್ಷ 30 ಸಾವಿರದಷ್ಟು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2017ರಲ್ಲಿ ಪುರ್ನವಸತಿ ಅಗತ್ಯವಿರುವ 11.9 ಲಕ್ಷ ನಿರಾಶ್ರಿತರ ಪೈಕಿ ಶೇ 15ರಷ್ಟು ಜನರಿಗೆ 2017ರ ಹೊತ್ತಿಗೆ ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಸೋಮವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ. ಸ್ವದೇಶಕ್ಕೆ […]
↧