ಬೀಜಿಂಗ್ (ಪಿಟಿಐ): ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಸಿಗುವುದರಿಂದ ದಕ್ಷಿಣ ಏಷ್ಯಾದ ‘ಸಮತೋಲನ’ ಹಾಳಾಗಲಿದೆ ಎಂದು ಚೀನಾದ ಪ್ರಮುಖ ಮಾಧ್ಯಮ ‘ಗ್ಲೋಬಲ್ ಟೈಮ್ಸ್’ ವರದಿ ಮಾಡಿದೆ. ಭಾರತಕ್ಕೆ ಎನ್ಎಸ್ಜಿ ಸದಸ್ಯತ್ವ ಸಿಕ್ಕರೆ ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಾಯ ಎದುರಾಗಲಿದೆ. ಅಲ್ಲದೆ, ಇದರಿಂದ ಪಾಕಿಸ್ತಾನಕ್ಕೂ ಆತಂಕ ಉಂಟಾಗಲಿದೆ ಎಂದು ‘ಗ್ಲೋಬಲ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ. ಭಾರತ ಎನ್ಎಸ್ಜಿ ಸದಸ್ಯತ್ವ ಪಡೆಯದಂತೆ ಅಡ್ಡಗಾಲು ಹಾಕುತ್ತಿರುವ ಚೀನಾದ ಪ್ರಯತ್ನಕ್ಕೆ ಇದು ಇನ್ನಷ್ಟು ಪುಷ್ಟಿ ನೀಡಿದಂತಾಗಿದೆ. 48 ರಾಷ್ಟ್ರಗಳ ಎನ್ಎಸ್ಜಿ ಸದಸ್ಯತ್ವಕ್ಕೆ ಚೀನಾದ […]
↧