ಸಕ್ಕರೆ ಅಂಶವು ರಕ್ತದಲ್ಲಿ ಹೆಚ್ಚಾಗಿ ಕಿಡ್ನಿಯ ಮೂಲಕ ಮೂತ್ರದಲ್ಲಿ ಕಾಣಿಸುತ್ತದೆ. ಆದ್ದರಿಂದ ಇದಕ್ಕೆ ಸಿಹಿಮೂತ್ರ ಅನ್ನುವ ಹೆಸರು ಇದೆ. ಸಹಜವಾಗಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ಇನ್ಸುಲಿನ್ ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಅಂದರೆ ದೇಹದ ಪ್ಯಾಂಕ್ರಿಯಾಸ್ ಅನ್ನುವ ಅಂಗದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್. ಆಹಾರದ ನಂತರ ರಕ್ತದಲ್ಲಿ ಸಕ್ಕರೆ ಪ್ರಮಾಣವು ಹೆಚ್ಚಿದಾಗ ಪ್ಯಾಂಕ್ರಿಯಾಸ್‌ನಿಂದ ಇನ್ಸುಲಿನ್ ಉತ್ಪತ್ತಿಯಾಗಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಸಮತೋಲನದಲ್ಲಿಡುತ್ತದೆ. ಇನ್ಸುಲಿನ್ ಕೊರತೆ ಅಥವಾ ಉತ್ಪತ್ತಿಯಲ್ಲಿ ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಹೆಚ್ಚಿರುತ್ತದೆ. ಪ್ರಮುಖ ಮಧುಮೇಹದ ವಿಧಗಳೆಂದರೆ ಟೈಪ್1, ಟೈಪ್2, ಗೆಸ್ಟೇಷನಲ್. […]
↧