ಬ್ಯಾಂಕಾಕ್ : ಇಲ್ಲಿಗೆ ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ಬಹುವಾಗಿ ಸೆಳೆಯುವ ವೇಶ್ಯಾಗ್ರಹಗಳನ್ನುಮತ್ತು ಸ್ವಚ್ಛಂದದ ಬಾರ್ಗಳನ್ನು ಮುಚ್ಚಲು ಥೈಲ್ಯಾಂಡ್ನ ಪ್ರವಾಸೋದ್ಯಮ ಸಚಿವೆ ಆದೇಶ ನೀಡಿದ್ದು ಅದನ್ನೇ ನಂಬಿರುವ ಸಾವಿರಾರು ಮಂದಿ ವೇಶ್ಯೆಯರು ದಿಕ್ಕು ತೋಚದಾಗಿದ್ದಾರೆ. ದೇಶದ ಮೊದಲ ಮಹಿಳಾ ಪ್ರವಾಸೋದ್ಯಮ ಸಚಿವೆಯಾಗಿರುವ ಕೋಬ್ಕಾರ್ನ್ ವಟ್ಟಾನಾವ್ರಾಂಗ್ಕುಲ್ ಅವರು ಥೈಲ್ಯಾಂಡ್ಗೆ ಕುಖ್ಯಾತಿ ತಂದಿಟ್ಟಿರುವ ಲೈಂಗಿಕ ವ್ಯಾಪಾರದಿಂದ ಮುಕ್ತ ದೇಶವನ್ನು ಮಾಡಿಸಲು ಈ ದಿಟ್ಟ ನಿರ್ಧಾರ ತಳೆದಿದ್ದಾರೆ. ಥೈಲ್ಯಾಂಡ್ನಲ್ಲಿ ವೇಶ್ಯಾವಾಟಿಕೆ ಕಾನೂನು ಬಾಹಿರ ಆದರೆ ಇಲ್ಲಿಗೆ ಬರುವ ಹೆಚ್ಚಿನ ಪ್ರವಾಸಿಗರು ವೇಶ್ಯೆಯರೊಂದಿಗೆ ಮಜಾ ಮಾಡುವ […]
↧