ಇಸ್ಲಾಮಾಬಾದ್ (ಪಿಟಿಐ): ಕಾಶ್ಮೀರ ಕೇವಲ ಭಾರತದ ಆಂತರಿಕ ವಿಷಯವಲ್ಲ. ಕಾಶ್ಮೀರಿಗಳಿಗೆ ಹಕ್ಕುಗಳನ್ನು ನೀಡಲು ಭಾರತ ಜನಾಭಿಪ್ರಾಯ ಸಂಗ್ರಹ ಮಾಡಬೇಕು ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ಕಾಶ್ಮೀರ ಜನರಿಗೆ ಬೆಂಬಲ ಸೂಚಿಸಲು ಕರಾಳ ದಿನ ಆಚರಿಸಲಾಗುವುದು. ಈ ಮೂಲಕ ಪಾಕಿಸ್ತಾನ ಕಾಶ್ಮೀರ ಜನರ ಪರವಾಗಿದೆ ಎಂಬ ಸಂದೇಶ ರವಾನಿಸಲಾಗುವುದು ಎಂದು ಷರೀಫ್ ತಿಳಿಸಿದ್ದಾರೆ. ಭಾರತ ಕಾಶ್ಮೀರ ಜನರ ಧ್ವನಿ ಅಡಗಿಸಲು ಭದ್ರತಾ ಪಡೆಗಳನ್ನು ಬಳಸಿಕೊಳ್ಳುತ್ತಿದೆ. ವಿಶ್ವಸಂಸ್ಥೆ ಕೂಡಲೇ ಮಧ್ಯಪ್ರವೇಶಿಸಿ ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಘೋಷಣೆ ಮಾಡಬೇಕು […]
↧