ಬೆಂಗಳೂರು: ಸೂಪರ್ಸ್ಟಾರ್ ರಜನಿಕಾಂತ್ಒಂದು ಕಾಲದಲ್ಲಿ ಅವರ ಜೇಬಿನಲ್ಲಿದ್ದಿದ್ದು ಕೇವಲ ನಾಲ್ಕಾಣೆ, ಎಂಟಾಣೆಯಂಥ ಚಿಲ್ಲರೆಗಳು. ಬೆಂಗಳೂರು ಟ್ರಾನ್ಸ್ಪೋರ್ಟ್ ಸರ್ವಿಸ್ನಲ್ಲಿ ಬಸ್ ಕಂಡಕ್ಟರ್ ಆಗಿ ಸರ್ಕಾರಿ ಜವಾನರಾಗಿದ್ದ ರಜನಿ ಆಗಲೇ ಸ್ಟೈಲಿಷ್ ಕನ್ನಡಕ ಧರಿಸಿ, ಬೀಡಿಯನ್ನೂ ವಿಭಿನ್ನವಾಗಿ ಮೇಲಕ್ಕೆ ಹಾರಿಸುತ್ತಾ ಶಿಳ್ಳೆ ಗಿಟ್ಟಿಸಿಕೊಂಡವರು. ಬಿಡುವು ಸಿಕ್ಕಾಗಲೆಲ್ಲ ನಾಟಕಕ್ಕೆ ಬಣ್ಣ ಹಚ್ಚಿದ ಶಿವಾಜಿರಾವ್ ಗಾಯಕ್ವಾಡ್ ಚೆನ್ನೈಗೆ ಹೋಗಿ ‘ಅಪೂರ್ವ ರಾಗಂಗಳ್’ನಲ್ಲಿ ನಟಿಸಿ, ಸಿನಿರಂಗದಲ್ಲಿ ಕ್ರಮೇಣ ಸ್ಟಾರ್ ಆಗಿ ಹೊರಹೊಮ್ಮಿದ್ದು ಇಂದು ನಮ್ಮ ಕಣ್ಮುಂದಿನ ನಂಬಲಾಗದ ಸತ್ಯ. ಸರ್ಕಾರಿ ಕೆಲಸದಲ್ಲೇ ಇರುತ್ತಿದ್ದರೆ, ರಜನಿ […]
↧