ಬೀಜಿಂಗ್ (ಪಿಟಿಐ): ಚೀನಾದ ಅಧಿಕೃತ ಸುದ್ದಿ ಸಂಸ್ಥೆಗಾಗಿ ಕಾರ್ಯವೆಸಗುತ್ತಿದ್ದ ಮೂರು ಪತ್ರಕರ್ತರನ್ನು ದೇಶ ತೊರೆಯುವಂತೆ ಹೇಳಿದ ಭಾರತದ ನಿರ್ಧಾರದ ವಿರುದ್ಧ ಚೀನಾದ ಸುದ್ದಿ ಪತ್ರಿಕೆ ಕಿಡಿ ಕಾರಿದೆ. ಭಾರತದ ಎನ್ಎಸ್ ಜಿ ಪ್ರವೇಶವನನ್ನು ಬೆಂಬಲಿಸದೇ ಇರುವುದಕ್ಕಾಗಿ ಭಾರತ ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆಯೇ? ಎಂದು ಚೀನಾದ ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸರ್ಕಾರಿ ಸ್ವಾಮ್ಯದ ಪತ್ರಿಕೆ ಗ್ಲೋಬಲ್ ಟೈಮ್ಸ್ ಪ್ರಶ್ನಿಸಿದೆ. ಒಂದು ವೇಳೆ ಹಾಗಾಗಿದ್ದಲ್ಲಿ, ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪತ್ರಿಕೆಯ ಸಂಪಾದಕೀಯದಲ್ಲಿ ಎಚ್ಚರಿಕೆಯನ್ನು ನೀಡಲಾಗಿದೆ. ಚೀನಾದ […]
↧