ಇಸ್ಲಮಾಬಾದ್: ಭಾರತದ ಭದ್ರತಾ ಕಳವಳವನ್ನು ಒಪ್ಪಿಕೊಂಡು ‘ಗಡಿಯಲ್ಲಿ ಭಯೋತ್ಪಾದನಾ ಚಟುವಟಿಕೆ’ಗಳನ್ನು ನಡೆಸುವವರನ್ನು ಪಾಕಿಸ್ತಾನ ತಡೆಯಬೇಕು ಎಂದು ಪಾಕಿಸ್ತಾನದ ಮುಂಚೂಣಿ ದಿನಪತ್ರಿಕೆ ಗುರುವಾರ ಹೇಳಿದೆ. ಇದು ಬಗೆಹರಿಯದ ಹೊರತು ಪಾಕಿಸ್ತಾನ ಮತ್ತು ಭಾರತ ಮಾತುಕತೆಯಿಂದ ತಮ್ಮ ವಿವಾದಗಳನ್ನು ಬಗೆಹರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಡೈಲಿ ಟೈಮ್ಸ್ ಸಂಪಾದಕೀಯದಲ್ಲಿ ಹೇಳಿದೆ. “ಕಾಶ್ಮೀರಿ ಚಳುವಳಿಗೆ ಪಾಕಿಸ್ತಾನ ಬೆಂಬಲ ರಾಜತಾಂತ್ರಿಕ ಮಟ್ಟದಲ್ಲಿ ಮಾತ್ರ ಇರಬೇಕು ಮತ್ತು ಶಸ್ತ್ರಾಸ್ತ್ರ ಹೋರಾಟವನ್ನು ಬೆಂಬಲಿಸುವ ಯಾವುದೇ ಭಯೋತ್ಪಾದಕ ಗುಂಪನ್ನು ಬೆಂಬಲಿಸಬಾರದು” ಎಂದು ಪತ್ರಿಕೆ ಹೇಳಿದೆ. ಇದೆ ಸಮಯದಲ್ಲಿ ಪಾಕಿಸ್ತಾನದ […]
↧