ವಿವಾಹಿತರಿಗಿಂತ ಅವಿವಾಹಿತರೇ ಹೆಚ್ಚು ಸಂತೃಪ್ತಿ ಹೊಂದಿರುತ್ತಾರಲ್ಲದೆ, ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಾರೆ, ಸ್ವಾವಲಂಬಿಗಳಾಗಿರುತ್ತಾರೆ ಎಂದು ಮನಶಾಸ್ತ್ರಜ್ಞರು ಹಲವು ಅಧ್ಯಯನ ವರದಿಗಳ ಮೂಲಕ ಕಂಡುಕೊಂಡಿದ್ದಾರೆ. ಯೂನಿರ್ವಸಿಟಿ ಆಫ್ ಕ್ಯಾಲಿಫೋರ್ನಿಯಾದ ಪ್ರಾಧ್ಯಾಪಕರಾದ ಡಾ. ಬೆಲ್ಲಾ ಡೇಪೌಲೊ, ಸಾಮಾನ್ಯವಾಗಿ ಅವಿವಾಹಿತರು ಒಬ್ಬಂಟಿ ಹಾಗೂ ದುಃಖದಲ್ಲಿರುತ್ತಾರೆ ಎಂಬ ಅಭಿಪ್ರಾಯ ಇದೆ. ಆದರೆ ಇದು ವಾಸ್ತವಾಂಶ ಅಲ್ಲ. ಅವಿವಾಹಿತರು ಉಳಿದವರಿಗಿಂತ ಅರ್ಥಪೂರ್ಣ ಜೀವನ ನಡೆಸುತ್ತಾರೆ ಎಂದು ತಿಳಿಸಿದ್ದಾರೆ. ಅಮೆರಿಕದ ಮನಶಾಸ್ತ್ರ ಸೊಸೈಟಿಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿರುವ ಡಾ. ಬೆಲ್ಲಾ ಡೇಪೌಲೊ, ಅವಿವಾಹಿತರು ಸಮಾಜದಿಂದ ಪ್ರತ್ಯೇಕವಾಗಿರುತ್ತಾರೆ […]
↧