ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಅತಿ ಹೆಚ್ಚು ಕಾಡುತ್ತವೆ. ದೇಹದ ರೋಗ ನಿರೋಧಕ ಶಕ್ತಿಗಳು ಕುಂಠಿತಗೊಳ್ಳುತ್ತವೆ. ಹಾಗಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸಿದರೆ ಮುಂಗಾರು ಮಳೆಯ ಸಂದರ್ಭದಲ್ಲಿ ಬರುವ ರೋಗಗಳನ್ನು ದೂರ ಇಡಬಹುದು. ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗದಲ್ಲಿ ಮಲೇರಿಯಾಗೆ ಮೊದಲ ಸ್ಥಾನ. ಮಲೇರಿಯಾಗೆ ಮುಖ್ಯ ಕಾರಣ ಸೊಳ್ಳೆ. ಹಾಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ ಸೊಳ್ಳೆಯ ಉತ್ಪತ್ತಿಯನ್ನು ತಡೆಯಬಹುದು. ಮಲಗುವಾಗ ಸೊಳ್ಳೆ ಪರದೆ ಹಾಗೂ ಸೊಳ್ಳೆ ನಿರೋಧಕಗಳನ್ನು ಬಳಸುವುದರಿಂದ ಸೊಳ್ಳೆಯಿಂದ ಬರುವ ರೋಗಗಳಿಂದ ಪಾರಾಗಬಹುದು. ಆದಷ್ಟು ಪರಿಸರವನ್ನು ಸ್ವಚ್ಛವಾಗಿರಿಸಿ […]
↧