ಸ್ಪರ್ಧಾತ್ಮಕ ಯುಗದಲ್ಲಿ ಬದುಕು ಸಾಗಿಸುತ್ತಿರುವ ಅನೇಕ ಮಂದಿ ಮಾನಸಿಕ ಒತ್ತಡಕ್ಕೆ ಸಿಲುಕಿರುತ್ತಾರೆ. ಇದು ನಾನಾ ಬಗೆಯ ರೋಗ ರುಜಿನಗಳಿಗೆ ಕಾರಣವಾಗುತ್ತದೆ. ಮಾನಸಿಕ ಒತ್ತಡ, ರಕ್ತದೊತ್ತಡಕ್ಕೂ ದಾರಿ ಮಾಡಿಕೊಡಲಿದೆ. ಮಾನಸಿಕ ಒತ್ತಡದ ಕಾರಣದಿಂದ ಎದುರಾಗುವ ಅಧಿಕ ರಕ್ತದೊತ್ತಡ ಇಂದು ಸಾಮಾನ್ಯವಾಗಿದ್ದು, ಇತ್ತೀಚೆಗೆ ಯುವ ಜನಾಂಗದಲ್ಲಿಯೂ ಕಂಡುಬರುತ್ತಿದೆ. ಸ್ಪರ್ಧಾತ್ಮಕ ಬದುಕೇ ಇದಕ್ಕೆ ಕಾರಣವಾಗಿದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸುಲಭ ಮಾರ್ಗಗಳೂ ಇಲ್ಲದಿಲ್ಲ. ಮಾನಸಿಕ ಒತ್ತಡಕ್ಕೆ ಒಳಗಾಗದೇ ಇರಲು ವ್ಯಾಯಾಮ, ಧ್ಯಾನ, ವಾಯುವಿಹಾರ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಒಳ್ಳೆಯದು. ಮಾನಸಿಕ ಒತ್ತಡದ […]
↧