ರಿಯೋ ಡಿ ಜನೈರೊ: ಬುಧವಾರ ನಡೆದ ಬ್ಯಾಡ್ಮಿಂಟನ್ ಕ್ವಾರ್ಟರ್ ಫೈನಲ್ ರೋಚಕ ಹಣಾಹಣಿಯಲ್ಲಿ ಪಿ.ವಿ. ಸಿಂಧು ಚೀನದ ವರ್ಲ್ಡ್ ನಂ.2 ಖ್ಯಾತಿಯ ವಾಂಗ್ ಯಿಹಾನ್ ಅವರನ್ನು ಮಣಿಸಿ ಸೆಮಿ ಫೈನಲ್ ಪ್ರವೇಶಿಸಿ ಭಾರತದ ಪದಕದ ಆಸೆ ಜೀವಂತವಾಗಿರಿಸಿದ್ದಾರೆ. ಯಿಹಾನ್ ವಿರುದ್ದ ಜಿದ್ದಾಜಿದ್ದಿನ ಹೋರಾಟದಲ್ಲಿ ಅದ್ಭುತ ಆಟವಾಡಿದ ಸಿಂಧು 22-20, 21-19 ಸೆಟ್ಗಳಿಂದ ಜಯ ತನ್ನದಾಗಿಸಿಕೊಂಡರು. ಭಾರತದ ರಿಯೋ ನಿರೀಕ್ಷೆಗಳೆಲ್ಲ ಒಂದೊಂದಾಗಿ ಕಮರುತ್ತಿರುವ ಹೊತ್ತಿನಲ್ಲಿ ಬ್ಯಾಡ್ಮಿಂಟನ್ ತಾರೆ, 2 ಬಾರಿಯ ವಿಶ್ವ ಚಾಂಪಿಯನ್ಶಿಪ್ ಕಂಚಿನ ವಿಜೇತೆ ಪಿ.ವಿ. ಸಿಂಧು […]
↧