ಕ್ಯಾಲಿಪೋರ್ನಿಯ,ಆ.17: ನೆಟ್ವರ್ಕ್ ಉತ್ಪನ್ನ ನಿರ್ಮಾಣ ಕಂಪೆನಿಯಾದ ಸಿಸ್ಕೊ ಸಿಸ್ಟಮ್ಸ್ 14,000 ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಿದೆ ಎಂದು ವರದಿಯಾಗಿದೆ.ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೂಡಲೇ ಬಹಿರಂಗಪಡಿಸಲಾಗುವುದು ಎಂದು ಸಿಆರ್ಎನ್ ವರದಿ ತಿಳಿಸಿದೆ. ಅದೇ ವೇಳೆ, 70,000ಕ್ಕೂ ಅಧಿಕ ಉದ್ಯೋಗಿಗಳನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗುತ್ತದೆ ಎಂಬ ಸುದ್ದಿಯಾಗಿದ್ದು ಇದನ್ನು ಕಂಪೆನಿ ಅಧಿಕಾರಿಗಳು ದೃಢಪಡಿಸಿಲ್ಲ. ಕ್ಯಾಲಿಪೋರ್ನಿಯದ ಸನ್ಜೋಸ್ನಲ್ಲಿ ಸಿಸ್ಕೊದ ಕೇಂದ್ರ ಕಚೇರಿಯಿದೆ. ಮೈಕ್ರೊಸಾಫ್ಟ್ ಕಾರ್ಪೊರೇಶನ್ ಮತ್ತು ಎಚ್ಪಿ ಕಂಪೆನಿಗಳು ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತಗೊಳಿಸಲಾಗುವುದೆಂದು ಈ ಮೊದಲೇ ಘೋಷಿಸಿವೆ. ಮುಂದಿನ ಹನ್ನೆರಡು ತಿಂಗಳುಗಳಲ್ಲಿ 2,850 ಮಂದಿಯನ್ನು […]
↧