ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸ ಹಾಗೂ ದುಡ್ಡು ಗಳಿಸುವ ತವಕದಿಂದ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗಿಬಿಡುತ್ತದೆ. ಆಗ ಒಂದು ದಿನ ಆರೋಗ್ಯ ಕೈಕೊಟ್ಟು ಎಲ್ಲ ಕೆಲಸಗಳಿಗೂ ಬ್ರೇಕ್ ಬಿಳುತ್ತದೆ. ಆಧುನಿಕÀ ಬದುಕಿನಲ್ಲಿ ಆರೋಗ್ಯ ಕೈಕೊಟ್ಟರೆ ಸಮಸ್ಯೆಗಳು ಸಾಲುಗಟ್ಟಿ ನಿಂತು ಕಾಡಲಾರಂಭಿಸುತ್ತವೆ. ನಾವು ಎಲ್ಲಿಯವರೆಗೂ ಆರೋಗ್ಯಕ್ಕಾಗಿ ಸಮಯವನ್ನು ಕಾಯ್ದಿರಿಸುವುದುಲ್ಲವೋ ಅಲ್ಲಿಯವರೆಗೂ ದಾರಿಯುದ್ದಕ್ಕೂ ಗಂಡಾಂತÀರಗಳು ಓಡುವ ಬದುಕಿಗೆ ತಡೆಯೊಡ್ಡಲು ಕಾದು ಕೂತಿರುತ್ತವೆ. […]
↧