ಒತ್ತಡದ ಜೀವನ, ಕುಳಿತಲ್ಲೇ ಮಾಡುವ ಕೆಲಸ, ಆಹಾರದಲ್ಲಿನ ಮಾರ್ಪಾಡುಗಳು ಹೀಗೆ ಬದಲಾದ ಜೀವನ ಶೈಲಿಯಿಂದ ಬೆನ್ನುನೋವು ಕಂಡುಬರುತ್ತದೆ. ಆದರೆ ಇದು ಕಾಯಿಲೆಯಾಗಿರದೆ ಒಂದು ಬಗೆಯ ರೋಗ ಲಕ್ಷಣವಾಗಿದೆ. ತೀವ್ರ ಯಾತನಾಮಯವಾಗಿರುವ ಹಾಗೂ ಅಶಕ್ತತೆಯುಳ್ಳ ಕಾಯಿಲೆಯಾಗಿದ್ದು ಇದು ಬಹುವಿಧ ದೈಹಿಕ ಅಂಶಗಳಿಂದ(ಮಲ್ಟಿಪಲ್ ಫಿಸಿಕಲ್ ಫ್ಯಾಕ್ಟರ್ಸ್) ತನ್ನ ಮೂಲವನ್ನು ಪಡೆದಿವೆ. ಇದು ದೇಹದ ಯಾವುದೇ ಭಾಗದಲ್ಲೂ ತನ್ನ ಪರಿಣಾಮವನ್ನು ಬೀರಬಹುದು. ದೃಢವಾದ ನೋವು, ಮುಂದೆ ಬಾಗುವಾಗ ಉಂಟಾಗುವ ನೋವು, ಅಂಗಾಂಗಳಲ್ಲಿನ ನೋವು ಇದರ ಪ್ರಮುಖ ಲಕ್ಷಣವಾಗಿದೆ. ಇದನ್ನು ಜೀವನ ಪರ್ಯಂತ […]
↧