ಲಂಡನ್: ವೇಗದ ಬದುಕಿನ ನಡುವೆ ಹಲವು ಕಾಯಿಲೆಗಳ ಮಧ್ಯೆ ಶ್ವಾಸಕೋಶದ ಕ್ಯಾನ್ಸ’ರ್ ಕೂಡ ಒಂದು. ಉಸಿರಾಟಕ್ಕೆ ತೊಂದರೆ ನೀಡಿ ಜೀವ ನಿಲ್ಲಿಸುವ ಶ್ವಾಸಕೋಶದ ಕ್ಯಾನ್ಸರ್’ಗೆ ಮನೆ ಮದ್ದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಅದೇನಂದರೆ ನಿತ್ಯವು ಒಂದು ಗಂಟೆಗಳ ಕಾಲ ವ್ಯಾಯಾಮವನ್ನು ರೂಢಿಸಿಕೊಂಡರೆ ನಿಮಗೆ ಬಂದಿರುವ ಶ್ವಾಸಕೋಶದ ಕ್ಯಾನ್ಸರ್’ಅನ್ನು ನಿವಾರಿಸಬಹುದು. ಸ್ವಿಜರ್ಲ್ಯಾಂಡ್’ನ ಝುರಿಕ್’ನ ವಿಶ್ವವಿದ್ಯಾಲಯದ ವೈದ್ಯಕೀಯ ತಂಡ ಶ್ವಾಸಕೋಶದ ಕ್ಯಾನ್ಸರ್ ಇರುವ 409 ಮಂದಿಗೆ ವ್ಯಾಯಾಮ ಮಾಡಿಸಿದೆ. ಆಗ ಬಹುತೇಕರಲ್ಲಿ ಕ್ಯಾನ್ಸರ್ ರೋಗಾಣುಗಳು ಕಡಿಮೆಯಾಗಿದೆಯಂತೆ.
↧