ನವದೆಹಲಿ: ಬಗ್ಗಿದ್ರೆ ಜುಟ್ಟು ಹಿಡೀತಾರೆ, ಎದ್ರೆ ಕಾಲು ಹಿಡೀತಾರೆ ಅನ್ನೋದು ಪಾಕಿಸ್ತಾನದ ವಿಷಯದಲ್ಲಿ ಸಾಬೀತಾಗ್ತಿದೆ. ಭಾರತದ ಸರ್ಜಿಕಲ್ ದಾಳಿ ಬಳಿಕ ಪಾಕಿಸ್ತಾನ ಮಾತುಕತೆಗೆ ಸಿದ್ಧ ಎಂಬ ಹೊಸ ರಾಗ ಶುರು ಮಾಡಿದೆ. ನಾವು ಮಾತುಕತೆಗೆ ಸಿದ್ಧ ಇದ್ದೀವಿ. ಆದ್ರೆ ಭಾರತ ಸಿದ್ಧವಾಗಿಲ್ಲ. ಭಾರತ ಮಾತುಕತೆಗೆ ಬರೋವರೆಗೂ ನಾವು ಕಾಯುತ್ತೀವಿ ಅಂತ ಪಾಕ್ ಹೈಕಮಿಷನರ್ ಅಬ್ದುಲ್ ಬಸೀತ್ ಹೇಳಿಕೆ ಕೊಟ್ಟಿದ್ದಾರೆ. ಯುದ್ಧ ಯಾವುದೇ ಸಮಸ್ಯೆಗೂ ಪರಿಹಾರವಲ್ಲ. ಮಾತುಕತೆಯ ಮೂಲಕ ಮಾತ್ರ ಉಭಯ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯ […]
↧