ಓಸ್ಲೋ: ಕೊಲಂಬಿಯಾದ ಸರ್ಕಾರ ಮತ್ತು ಎಫ್ಎಆರ್ ಸಿ ಬಂಡಾಯ ಗುಂಪಿನ ನಡುವೆ ಶಾಂತಿ ನೆಲೆಸಲು ಪ್ರಮುಖ ಕಾರಣವಾಗಿದ್ದ ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ನೊಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾರ್ವೆಯ ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಸಮಿತಿ 2016 ನೇ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಅಂತಿಮಗೊಳಿಸಿದ್ದು, ಕಳೆದ 50 ವರ್ಷಗಳಿಂದ ಕೊಲಂಬಿಯಾ ಸರ್ಕಾರ ಮತ್ತು ಎಫ್ಎಆರ್ ಸಿ ನಡುವೆ ನಡೆಯುತ್ತಿದ್ದ ನಾಗರಿಕ ಯುದ್ಧವನ್ನು ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದ್ದ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಗೆ ಪ್ರಶಸ್ತಿಯನ್ನು ಘೋಷಿಸಿದೆ. […]
↧