ವಾಷಿಂಗ್ಟನ್: ಡೊನಾಲ್ಡ್ಟ್ರಂಪ್ಅಮೆರಿಕದ ವರ್ಣರಂಜಿತ ವ್ಯಕ್ತಿ, ಕೋಟ್ಯಧೀಶ, ರಾಜಕಾರಣಿ. ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವುದು ಅವರ ಪ್ರವೃತ್ತಿ. ಅಮೆರಿಕದ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯನ್ನು ಅವರು ಏಕಾಂಗಿಯಾಗಿ ಎದುರಿಸಿದರು. ಅಮೆರಿಕದ ರಾಜಕೀಯದಲ್ಲಿನ ಒಪ್ಪಿತ ನಿಲುವುಗಳನ್ನು ತಿರಸ್ಕರಿಸಿದರು. ನ್ಯೂಯಾರ್ಕ್ಮೂಲದ ಈ ರಿಯಲ್ಎಸ್ಟೇಟ್ಉದ್ಯಮಿ, ಪ್ರಭುತ್ವದ ಬಗ್ಗೆ ಸಾಮಾನ್ಯ ಅಮೆರಿಕನ್ನರಲ್ಲಿ ಮೂಡಿದ್ದ ಭ್ರಮನಿರಸನವನ್ನು ಗ್ರಹಿಸಿದರು. ಅದನ್ನು ಅಪಾಯಕಾರಿ ‘ವಲಸಿಗ ವಿರೋಧಿ’ ಭಾಷಣಗಳಲ್ಲಿ ಉಲ್ಲೇಖಿಸಿದರು. ಇದು ಟ್ರಂಪ್ಅವರಿಗೆ ಚುನಾವಣೆಯಲ್ಲಿ ಯಶಸ್ಸು ತಂದುಕೊಟ್ಟಿತು. ಡೆಮಾಕ್ರಟಿಕ್ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಟ್ರಂಪ್ನಡುವಣ ಜಿದ್ದಾಜಿದ್ದಿನ ಚುನಾವಣೆ ಇದಾಗಿತ್ತು. […]
↧