ಸನ್ನಿವೇಲ್ (ಕ್ಯಾಲಿಫೋರ್ನಿಯಾ, ಅಮೆರಿಕ): ತನ್ನ 1 ಬಿಲಿಯನ್ (100 ಕೋಟಿ) ಮಂದಿಯ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಯಾಹೂ.ಕಾಮ್ ಪ್ರಕಟಿಸಿದೆ. ಕಂಪನಿಯ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಪ್ರಮಾಣದ ಭದ್ರತಾ ಲೋಪ ಇದಾಗಿದ್ದು, ಯಾಹೂ ಕಂಪನಿ ಭದ್ರತಾ ಲೋಪ ವಿಚಾರದಲ್ಲಿ ತನ್ನದೇ ದಾಖಲೆಯನ್ನು ಮುರಿದಂತಾಗಿದೆ. ಬುಧವಾರ (ಭಾರತದಲ್ಲಿ ಗುರುವಾರ) ಯಾಹೂ ಖಾತೆಗಳು ಹ್ಯಾಕ್ ಆಗಿರುವುದನ್ನು ಬಹಿರಂಗ ಪಡಿಸಲಾಗಿದೆ. 2013ರಲ್ಲಿ ಸಂಭವಿಸಿದ್ದ ಕಂಪನಿಯ ಖಾತೆಗಳ ಹ್ಯಾಕ್ನಿಂದ 500 ಮಿಲಿಯನ್ (50 ಕೋಟಿ) ಮಂದಿ ಖಾತೆದಾರರಿಗೆ ತೊಂದರೆಯಾಗಿತ್ತು. ‘ಇದು ಆಘಾತಕಾರಿ’ […]
↧