ಲಂಡನ್ : ದುಬೈನ 24ರ ಹರೆಯದ ಮೊವಾಝಾ ಅಲ್ ಮತ್ರೂಷಿ ಮಂಗಳವಾರ ಲಂಡನ್ನಿನ ಪೋರ್ಟ್ಲ್ಯಾಂಡ್ ಆಸ್ಪತ್ರೆಯಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ರಶೀದ್ ಎಂದು ನಾಮಕರಣ ಮಾಡಲಾಗಿದೆ. ಇದರಲ್ಲೇನು ವಿಶೇಷ ಎನ್ನುವಿರಾ? ಹೌದು…ವಿಶೇಷವಿದೆ. ಮೊವಾಝಾ ತನ್ನ ಋತುಚಕ್ರ ಆರಂಭಗೊಳ್ಳುವ ಮುನ್ನ ತೆಗೆದು ಕಾಯ್ದಿರಿಸಲಾಗಿದ್ದ ಅಂಡಾಶಯ ಅಂಗಾಂಶ ವನ್ನು ಬಳಸಿಕೊಂಡು ಯಶಸ್ವಿಯಾಗಿ ಗರ್ಭ ಧರಿಸಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಅಲ್ಲದೆ 13 ವರ್ಷಗಳ ಕಾಲ ಘನೀಕೃತ ಸ್ಥಿತಿಯಲ್ಲಿದ್ದ ಅಂಡಾಶಯ ಅಂಗಾಂಶವನ್ನು ಕಸಿ […]
↧