ಅಲ್ಜೇರ್ಸ್: ಸಹರಾ ಮರುಭೂಮಿಯಲ್ಲಿ 37 ವರ್ಷಗಳ ಬಳಿಕ ಹಿಮಮಳೆಯಾಗಿದೆ. ಉತ್ತರ ಆಫ್ರಿಕಾದ ಅಲ್ಜೇರಿಯಾದ ಸಹರಾ ಮರುಭೂಮಿಯಲ್ಲಿ ಹಿಮಮಳೆಯಾಗಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಹರಾದ ಯೇನ್ಸೆಫ್ರಾದಲ್ಲಿ 1979ರಲ್ಲಿ ಹಿಮಮಳೆಯಾಗಿತ್ತು. ಆ ಬಳಿಕ ಇತ್ತೀಚೆಗೆ ಅಲ್ಜೇರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಮಳೆಯಾಗಿದೆ. ಮರಳ ಮೇಲೆ ಹಿಮ ಸುರಿದಿರುವ ಚಿತ್ರಗಳು ಚಿತ್ತಾಕರ್ಷಕವಾಗಿವೆ. ಕರೀಮ್ ಬೋಚೆಟಟ (Karim Bouchetata) ಎಂಬುವರು ಕ್ಲಿಕ್ಕಿಸಿರುವ ಈ ಚಿತ್ರಗಳು ಜಾಲತಾಣಗಳಲ್ಲಿ ವೈರಲ್ ಆಗಿವೆ. ಮರುಭೂಮಿಯ ಮಂಜಿನ ಮಳೆಗೆ ಸ್ಥಳೀಯರು ಪುಳಕಗೊಂಡಿದ್ದಾರೆ. 2005 ಮತ್ತು 2012ರಲ್ಲಿ ಸಹರಾದ […]
↧