ಇಸ್ಲಾಮಾಬಾದ್: ಸುಪ್ರೀಂ ಆದೇಶದ ನಡುವೆಯೂ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸದೆ ತೀವ್ರ ಟೀಕೆಗೆ ಒಳಗಾಗಿದ್ದ ಪಾಕಿಸ್ತಾನ ಸೆನೆಟ್ ಸಮಿತಿ, ಕೊನೆಗೂ ಹಿಂದೂ ವಿವಾಹ ಮಸೂದೆ ಕರಡಿಗೆ ಅನುಮೋದನೆ ನೀಡಿದ್ದು ಈ ಮೂಲಕ ಮಹತ್ವದ ನಿರ್ಧಾರವೊಂದನ್ನು ಮಂಗಳವಾರ ತೆಗೆದುಕೊಂಡಿದೆ. ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಕೌಟುಂಬಿಕ ಕಾನೂನಿನ ಅವಕಾಶ ನೀಡುವ ಸಲುವಾಗಿ ಪಾಕಿಸ್ತಾನ ಸೆನೆಟ್ ಸಮಿತಿ ಹಿಂದೂ ವಿವಾಹ ಮಸೂದೆಯ ಕರಡನ್ನು ಅನುಮೋದಿಸಿದೆ. ಪಾಕಿಸ್ತಾನದಲ್ಲಿರುವ ಹಿಂದೂಗಳಿಗೆ ಇದೊಂದು ಮಹತ್ವದ ಮಸೂದೆಯಾಗಿದ್ದು. ಇನ್ನುಮುಂದೆ ಪಾಕಿಸ್ತಾನದಲ್ಲಿರುವ ಹಿಂದೂಗಳು ತಮ್ಮ ವಿವಾದ ನೋಂದಣಿಗೆ ಮತ್ತು […]
↧