ವಾಷಿಂಗ್ಟನ್: ಅಮೆರಿಕದ ಫ್ಲೋರಿಡಾ ಏರ್‍ಪೋರ್ಟ್‍ನಲ್ಲಿ ಶುಕ್ರವಾರದಂದು ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಐವರು ಸಾವನ್ನಪಿದ್ದಾರೆ. ಫ್ಲೋರಿಡಾದ ಫೋರ್ಟ್ ಲಾಡೆರ್‍ಡೇಲ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪ್ರಯಾಣಿಕರು ಲಗೇಜ್‍ಗಳನ್ನು ತೆಗೆದುಕೊಳ್ಳುವ ಸ್ಥಳದಲ್ಲಿ ದುಷ್ಕರ್ಮಿ ಅದಾಗಲೇ ತಪಾಸಣೆಯಾಗಿದ್ದ ತನ್ನ ಬ್ಯಾಗ್‍ನಿಂದ ಗನ್ ತೆಗೆದು ಮನಸೋ ಇಚ್ಛೆ ಶೂಟ್ ಮಾಡಿದ್ದಾನೆ. ಘಟನೆಯಲ್ಲಿ 5 ಮಂದಿ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ರೆ, 8ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಗುಂಡಿನ ದಾಳಿ ನಡೆಸಿದ ಪಾತಕಿಯನ್ನು 26 ವರ್ಷದ ಎಸ್ಟಾಬೆನ್ ಸ್ಯಾಂಟಿಯಾಗೋ ಎಂದು ಗುರುತಿಸಲಾಗಿದ್ದು, ಪೊಲೀಸರು […]
↧