ಅರ್ಜೆಂಟಿನಾ(ಜ.15): ಮದುವೆ ಮುರಿದು ಬೀಳುವ ವಿಚಾರ ನಾವು ಕೇಳುತ್ತಿರುತ್ತೇವೆ, ಇದು ಹೊಸತೇನೂ ಅಲ್ಲ. ಆದರೆ ಮದುವೆ ಮುರಿದು ಬಿತ್ತೆಂದು ಯುವತಿಯೊಬ್ಬಳು ತನ್ನ ನಾಯಿಯೊಂದಿಗೆ ಮದುವೆಯಾದ ಪ್ರಸಂಗ ಬಹುಶಃ ಯಾರೂ ಕೇಳಿರಲಿಕ್ಕಿಲ್ಲ. ಅರ್ಜೆಂಟಿನಾದಲ್ಲಿ ಈ ಘಟನೆ ನಡೆದಿದ್ದು, ಮದುವೆಯ ದಿನವೇ ಪ್ರಿಯಕರ ಮದುಮಗಳನ್ನು ಬಿಟ್ಟು ಪರಾರಿಯಾಗಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮದುಮಗಳು ತನ್ನ ನಾಯಿಯೊಂದಿಗೆ ಮದುವೆಯಾಗಿದ್ದಾಳೆ. ಅರ್ಜೆಂಟಿನಾದ ರೊಬಿನಾ ಪೀಟೋಂ ಹೆಸರಿನ ಯುವತಿಗೆ ಆಕೆಯ ಪ್ರಯಕರನೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಮದುವೆಯ ಹಿಂದಿನ ದಿನ ಈ ಸಂಬಂಧ ಮುರಿದು ಬಿದ್ದಿದೆ. […]
↧