ದಾವೋಸ್: ಸೋಮವಾರ ಪ್ರಾರಂಭವಾಗಿರುವ ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) 47ನೇಯ ಐದು ದಿನಗಳ ಸಮಾವೇಶದಲ್ಲಿ ಆಕ್ಸ್‌ಫ್ಯಾಂ ವರದಿ ಪ್ರಸ್ತುತ ಪಡಿಸಿದ್ದು, ದೊಡ್ಡ ಮಟ್ಟದಲ್ಲಿರುವ ಸಂಪತ್ತಿನ ಅಸಮತೋಲನವು ಸಮಾಜವನ್ನು ಪ್ರತ್ಯೇಕಗೊಳಿಸುವ ಅಪಾಯವಿದೆ ಎಂದಿದೆ. 2016ರ ಮಾರ್ಚ್‌ನಲ್ಲಿ ಬಿಡುಗಡೆಯಾಗಿರುವ ಫೋರ್ಬ್ಸ್ ಶ್ರೀಮಂತರ ಪಟ್ಟಿಯನ್ನು ಬಡತನ ನಿರ್ಮೂಲನಾ ಸಂಸ್ಥೆ ಆಕ್ಸ್‌ಫ್ಯಾಂ ಬಳಸಿಕೊಂಡಿದೆ. ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ ₹5.11 ಲಕ್ಷ ಕೋಟಿ(75 ಬಿಲಿಯನ್ ಡಾಲರ್) ಸಂಪತ್ತಿನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಜಗತ್ತಿನ ಮೊದಲ ಎಂಟು ಶ್ರೀಮಂತರ ಬಳಿ ಇರುವ ಸಂಪತ್ತು, ಜಗತ್ತಿನ ಅರ್ಧ ಜನಸಂಖ್ಯೆಯ […]
↧