ಪ್ಯಾರಿಸ್: ಜಗತ್ತಿನ ಸುಂದರ ತಾಣಗಳಲ್ಲೊಂದಾದ ಪ್ಯಾರಿಸ್ ನಗರದಲ್ಲಿರುವ ಐಫೆಲ್ ಗೋಪುರದ ಸುತ್ತಲು ಗುಂಡು ನಿರೋಧಕ ಗಾಜಿನ ಕವಚ ನಿರ್ಮಿಸುವ ಯೋಜನೆಯ ಬಗ್ಗೆ ಪ್ಯಾರಿಸ್ನ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಯೋತ್ಪಾದಕ ಕೃತ್ಯಗಳು ಹಾಗೂ ಮತ್ತಿತರೆ ದಾಳಿಗಳಿಂದ ಪ್ರವಾಸಿ ಸ್ಮಾರಕವನ್ನು ರಕ್ಷಿಸುವ ಉದ್ದೇಶದಿಂದ ಸುಮಾರು ₹140ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಲೆಕ್ಕಾಚಾರದಲ್ಲಿದೆ ಪ್ಯಾರಿಸ್ ಸರ್ಕಾರ. ನಗರದ ಉಪಮೇಯರ್ ಜೀನ್ ಫ್ರಾಂಕೋಯಿಸ್ ಮಾರ್ಟಿನ್, ‘ಉಗ್ರರ ದಾಳಿಗಳಿಂದ ಐಫೆಲ್ ಗೋಪುರವನ್ನು ರಕ್ಷಿಸಿಕೊಳ್ಳಬೇಕಾಗಿರುವುದು ನಮ್ಮ ಜವಾಬ್ದಾರಿ. ವಾರ್ಷಿಕ 60ಲಕ್ಷ ಮಂದಿ ಇಲ್ಲಿಗೆ ಭೇಟಿ […]
↧