ಥೆಸ್ಸಾಲೊನಿಕಿ(ಫೆ.11): ಇತ್ತೀಚೆಗೆ ಗ್ರೀಸ್‌ನಲ್ಲಿ ಪತ್ತೆಯಾದ 2ನೇ ಮಹಾಯುದ್ಧದ ಬಾಂಬ್‌ನ್ನು ಭಾನುವಾರ ನಿಷ್ಕ್ರಿಯಗೊಳಿಸಲು ಭರದ ಸಿದ್ಧತೆ ನಡೆದಿದೆ. ಇದರ ಭಾಗವಾಗಿ ಥೆಸ್ಸಾಲೊನಿಕಿ ನಗರದಲ್ಲಿ ವಾಸವಿರುವ 70,000 ಮಂದಿಯನ್ನು ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ. ಕಳೆದ ವಾರ ರಸ್ತೆ ದುರಸ್ತಿ ಕಾಮಗಾರಿ ವೇಳೆ ಉತ್ತರ ಭಾಗದ ನಗರದಲ್ಲಿ 250 ಕೆಜಿಯಷ್ಟಿರಬಹುದಾದ ಸ್ಫೋಟಕಗಳನ್ನು ಹೊಂದಿದ ಬಾಂಬ್ ಪತ್ತೆಯಾಗಿತ್ತು. ಅದನ್ನೀಗ ನಿಷ್ಕ್ರಿಯಗೊಳಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 300ಕ್ಕೂ ಹೆಚ್ಚು ಮಂದಿ ದಿವ್ಯಾಂಗರು ಮತ್ತು ರೋಗಿಗಳನ್ನು ಆ್ಯಂಬುಲೆನ್ಸ್ ಮೂಲಕ ಬೇರೆಡೆ ಸ್ಥಳಾಂತರಿಸಲಾಗುತ್ತಿದೆ. ಬಾಂಬ್ ನಿಷ್ಕ್ರಿಯದ ವೇಳೆ […]
↧