ಬೀಜಿಂಗ್: ಮುಂದಿನ ಹತ್ತು ವರ್ಷಗಳಲ್ಲಿ ಚೀನಾದ 3 ಕೋಟಿ ಯುವಕರು ವಧುವಿನ ಹುಡುಕಾಟಕ್ಕಾಗಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಅಲೆಯಬೇಕಾಗಿ ಬರಬಹುದು ಅಥವಾ ಒಂಟಿಯಾಗಿಯೇ ಜೀವನ ಸವೆಸಬೇಕಾಗುತ್ತದೆ ಎನ್ನುತ್ತಿದೆ ಹೊಸ ಅಧ್ಯಯನ. ಚೀನಾದಲ್ಲಿ 35ರಿಂದ 59 ವರ್ಷ ವಯಸ್ಸಿನ ಅವಿವಾಹಿತ ಪುರುಷರ ಸಂಖ್ಯೆ 2020ಕ್ಕೆ 1.5 ಕೋಟಿ ತಲುಪಲಿದೆ. ಈ ಸಂಖ್ಯೆ 2050ರ ವೇಳೆಗೆ 3 ಕೋಟಿ ದಾಟಲಿದೆ ಎಂದು ಸಮಾಜವಿಜ್ಞಾನದ ಚೀನಾ ಅಕಾಡೆಮಿಯ ಸಂಶೋಧಕ ವ್ಯಾಂಗ್ ತಿಳಿಸಿದರು. ಏಕಾಂಗಿ ಪುರುಷರ ಸಂಖ್ಯೆ ಹೆಚ್ಚಳಕ್ಕೆ ಶಿಕ್ಷಣದ ಕೊರತೆಯೇ ಕಾರಣ […]
↧