ಸಿಡ್ನಿ: ೧೯೮೦ ರಿಂದ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರಿಗೆ ಆಸ್ಟ್ರೇಲಿಯಾದ ಕ್ಯಾಥಲಿಕ್ ಚರ್ಚ್ ೨೧೩ ಮಿಲಿಯನ್ ಡಾಲರ್ ಪರಿಹಾರ ನೀಡಿದೆ ಎಂದು ಗುರುವಾರ ತನಿಖೆಯಿಂದ ಬಹಿರಂಗಗೊಂಡಿದೆ. ಈ ಹಣವನ್ನು ಸಾವಿರಾರು ಸಂತ್ರಸ್ತರಿಗೆ ಹಂಚಲಾಗಿದೆ ಎಂದು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಾಗಿ ಇರುವ ರಾಯಲ್ ಕಮಿಷನ್ ತನಿಖೆ ನಡೆಸಿ ನೀಡಿರುವ ವರದಿಯಲ್ಲಿ ತಿಳಿಸಿದೆ. ಸಂತ್ರಸ್ತರಿಗೆ ಸರಾಸರಿ ಪರಿಹಾರ ೭೦,೦೦೦ ಡಾಲರ್ ದೊರೆತಿದೆ ಎಂದು ಮಾಹಿತಿಯಿರುವುದಾಗಿ ಬಿಬಿಸಿ ವರದಿ ಮಾಡಿದೆ. ೯೮೦ ರಿಂದ ೨೦೧೫ ರವರೆಗೆ ದೂರಲಾಗಿರುವ ೪,೪೪೫ ಮಕ್ಕಳ […]
↧