ಸಿಯೋಲ್: ಉತ್ತರ ಕೊರಿಯಾ ಮತ್ತು ಮಲೇಷಿಯಾ ನಡುವೆ ಉಲ್ಭಣಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ತನ್ನ ದೇಶದಲ್ಲಿರುವ ಮಲೇಷಿಯಾ ಪ್ರಜೆಗಳು ದೇಶ ತೊರೆಯದಂತೆ ಉತ್ತರ ಕೊರಿಯಾ ನಿಷೇಧ ಹೇರಿದೆ. ಕೊಲಾಲಂಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹತ್ಯೆಯಾಗಿರುವ ಕಿಮ್ ಜಾಂಗ್ ನಾಮ್ ಪ್ರಕರಣದ ಪೂರ್ಣ ತನಿಖೆ ಮುಗಿಯುವವರೆಗೆ ಮಲೇಷಿಯನ್ನರಿಗೆ ದೇಶ ಬಿಡದಂತೆ ಆದೇಶಿಸಿರುವ ಉತ್ತರ ಕೊರಿಯಾದ ಕ್ರಮದಿಂದ ಈಗ ಆ ದೇಶದಲ್ಲಿರುವ ಮಲೇಷಿಯನ್ನರು ಅಕ್ಷರಶಃ ಒತ್ತೆಯಾಳುಗಳಾಗಿದ್ದಾರೆ. `ದೇಶದಲ್ಲಿ ನೆಲೆಸಿರುವ ಮಲೇಷಿಯನ್ನರು ಸದ್ಯಕ್ಕೆ ದೇಶ ತೊರೆಯದಂತೆ ನಿಷೇಧ ಹೇರಲಾಗಿದೆ’ ಎಂದು ಉತ್ತರ ಕೊರಿಯಾ […]
↧