ಬೀಜಿಂಗ್: ನದಿಯಲ್ಲಿ 300 ವರ್ಷಗಳ ಹಿಂದೆ ಮುಳುಗಿದ್ದ ಹತ್ತು ಸಾವಿರಕ್ಕೂ ಹೆಚ್ಚು ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಚೀನಾದ ಪುರಾತತ್ವಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ. ಚಿನ್ನ, ಬೆಳ್ಳಿ ಮತ್ತು ಕಂಚಿನ ನಾಣ್ಯಗಳು, ಆಭರಣ ಹಾಗೂ ಕಡ್ಗ, ಭರ್ಜಿ, ಚಾಕು ಸೇರಿದಂತೆ ಕಬ್ಬಿಣದ ಆಯುಧಗಳು ದೊರೆತಿವೆ. ಬೆಳ್ಳಿ, ಚಿನ್ನದ ಪಾತ್ರೆ ಹಾಗೂ ಆಭರಣಗಳಲ್ಲಿನ ಕುಸುರಿ ಕೆತ್ತನೆ ಇಂದಿಗೂ ಸ್ಪಷ್ಟವಾಗಿದೆ ಎಂದು ಸಿಚುವಾನ್ ಪ್ರಾಂತ್ಯದ ಪುರಾತತ್ವ ಸಂಶೋಧನಾ ಸಂಸ್ಥೆಯ ನಿರ್ದೇಶಕ ಗಾವೋ ಡಾಲನ್ ತಿಳಿಸಿದರು. ಸಿಚುವಾನ್ ಪ್ರಾಂತ್ಯದ ಮಿಂಜಿಯಾಂಗ್ ನದಿ ಹಾಗೂ ಜಿಂನ್‌ಜಿಯಾಂಗ್ […]
↧