ಕಠ್ಮಂಡು, ಮೇ 14- ಹಿಮಾಲಯಗಳ ನಾಡು ನೇಪಾಳದಲ್ಲಿ ಇಂದು ಬೆಳಗ್ಗೆ ಪುನಃ ಭೂಮಿ ನಡುಗಿದ್ದು, ಜನತೆ ಇನ್ನಷ್ಟು ಭಯಭೀತರಾಗಿದ್ದಾರೆ. ರಾಜಧಾನಿ ಕಠ್ಮಂಡು ಸೇರಿದಂತೆ ಕೆಲ ಭಾಗಗಳಲ್ಲಿ ಇಂದು ಬೆಳಗ್ಗೆ ಕೆಲ ಕಾಲ ಭೂಮಿ ನಡುಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4ರಷ್ಟು ದಾಖಲಾಗಿದೆ. ದೊಲಾಖ ಮತ್ತು ಸಿಂಧುಪಲ್ಚೌಕ್ ಕಂಪನದ ಕೇಂದ್ರ ಬಿಂದುವಾಗಿದೆ. ಇಂದು ಮುಂಜಾನೆ ಇದ್ದಕ್ಕಿದ್ದಂತೆ ಕೆಲ ಸೆಕೆಂಡ್ಗಳ ಕಾಲ ನಡುಗಿದ್ದರಿಂದ ಭಯಭೀತರಾದ ಜನ ಪ್ರಾಣ ರಕ್ಷಣೆಗಾಗಿ ಮನೆಯಿಂದ ಹೊರಗೋಡಿಬಂದಿದ್ದಾರೆ. […]
↧