ವಾಷಿಂಗ್ಟನ್: ವಿಜ್ಞಾನಿಗಳು ವಿಶೇಷವಾದ ಜೈವಿಕ ಅಂಶಗಳಿರುವ ಸಿಂಪಡಕ(ಸ್ಪ್ರೇ) ಅಭಿವೃದ್ಧಿ ಪಡಿಸಿದ್ದು, ಹೊಲಿಗೆ ಹಾಕದೆಯೇ ಹೃದಯದ ಅಂಗಾಂಶ ಗುಣಪಡಿಸ ಬಹುದಾಗಿದೆ. ಹೃದಯಾಘಾತದ ಸಂದರ್ಭದಲ್ಲಿ ಹೃದಯದ ಅಂಗಾಂಶಗಳಿಗೆ ಆಗುವ ಹಾನಿಯನ್ನು ಸುಲಭ ಹಾಗೂ ಸಮರ್ಥವಾಗಿ ಸರಿಪಡಿಸುವ ಕ್ರಮವನ್ನು ಅಮೆರಿಕದ ನಾರ್ಥ್ ಕರೋಲಿನಾ ವಿಶ್ವವಿದ್ಯಾಲಯದ ಸಂಶೋಧಕರು ಪ್ರಸ್ತುತ ಪಡಿಸಿದ್ದಾರೆ. ಹಾನಿಯಾಗಿರುವ ಹೃದಯದ ಭಾಗದಲ್ಲಿ ಜೈವಿಕ ಅಂಶಗಳ ಸ್ಪ್ರೇ ಬಳಸಿ ಸಿಂಪಡಿಸಿದರೆ ಹೃದಯದ ಮೇಲೆ ಜೆಲ್ ರೀತಿಯ ಲೇಪವಾಗುತ್ತದೆ. ಈ ಮೂಲಕ ಅಂಗಾಂಶಗಳು ಹೊಲಿಗೆ ಅಥವಾ ಅಂಟಿಸುವ ವಸ್ತುಗಳನ್ನು ಬಳಸದೆ ಸರಿಯಾಗುವುದನ್ನು ಗಮನಿಸಲಾಗಿದೆ. […]
↧