ಜೊಹಾನ್ಸ್‌ಬರ್ಗ್: ವರ್ಣಭೇದ ನೀತಿ ವಿರುದ್ಧದ ಹೋರಾಟದ ಮೂಲಕ ಖ್ಯಾತರಾಗಿದ್ದ ಭಾರತ ಮೂಲದ ಅಹ್ಮದ್ ಕಥ್ರಡ (87) ಇಲ್ಲಿನ ಡೊನಾಲ್ಡ್ ಗಾರ್ಡನ್ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಮಾರ್ಚ್ 4ರಂದು ನಿರ್ಜಲೀಕರಣಕ್ಕೊಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ತಿಳಿದುಬಂದಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ‘ಶಸ್ತ್ರಚಿಕಿತ್ಸೆಯ ಬಳಿಕ ಅವರ ಆರೋಗ್ಯ ಹದಗೆಟ್ಟಿತ್ತು’ ಎಂದು ಅಹ್ಮದ್ ಕಥ್ರಡ ಪ್ರತಿಷ್ಠಾನ ತಿಳಿಸಿದೆ. ವರ್ಣಭೇದ ನೀತಿ ವಿರೋಧಿ ಹೋರಾಟಗಾರ, ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರ ಆಪ್ತರಾಗಿರುವ ಕಥ್ರಡಾ ರೊಬ್ಬನ್ […]
↧