ಅಡೆನ್: ಹಿಂಸಾಚಾರ ಪೀಡಿತ ಯೆಮೆನ್ ನಿಂದ ಮಲೇಷ್ಯಾದತ್ತ ಆಗಮಿಸುತ್ತಿದ್ದ ಸರಕು ಸಾಗಾಣಿಕಾ ಹಡಗಿನ ಮೇಲೆ ದಾಳಿ ಮಾಡಿದ್ದ ಸೋಮಾಲಿಯಾ ಕಡಲ್ಗಳ್ಳರನ್ನು ಭಾರತ ಮತ್ತು ಚೀನಾ ನೌಕಾಪಡೆಗಳು ಹಿಮ್ಮೆಟಿಸಿದ ಘಟನೆ ನಡೆದಿದೆ. ಮೂಲಗಳ ಪ್ರಕಾರ ಯೆಮೆನ್ ಅಡೆನ್ ನಿಂದ ಮಲೇಷ್ಯಾದ ಕೆಳಂಗ್ ಬಂದರಿನತ್ತ ಪ್ರಯಾಣ ಬೆಳೆಸುತ್ತಿದ್ದ ದಕ್ಷಿಣ ಫೆಸಿಫಿಕ್ ನ ಟುವಲು ದ್ವೀಪದ ನೋಂದಣಿಯ MVOS35 ಹಡಗನ್ನು ಸೊಮಾಲಿಯಾ ಕಡಲ್ಗಳ್ಳರು ಹಿಂಬಾಲಿಸಿ ದಾಳಿ ಮಾಡಿದ್ದು, ಈ ವಿಚಾರವನ್ನು ತಿಳಿದ ಬ್ರಿಟನ್ ನ ಕಡಲ ವ್ಯಾಪಾರ ಸಂಸ್ಥೆ (Maritime Trade […]
↧