ಹೊಟ್ಟೆಯಲ್ಲಿ ಕತ್ತರಿಯನ್ನು ಬಿಟ್ಟ ವೈದ್ಯರ ಬಗೆಗೆ ಕೇಳಿದ್ದೀರಿ. ಆದರೆ ಇಲ್ಲೊಬ್ಬ ವೈದ್ಯರು ಮಹಿಳೆಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಿದ ಸಮಯದಲ್ಲಿ ತಮ್ಮ ಮೊಬೈಲ್ ಫೋನನ್ನು ಆಕೆಯ ಹೊಟ್ಟೆಯೊಳಗೇ ಮರೆತು ಬಿಟ್ಟು ತಮ್ಮ ವೃತ್ತಿ ನಿಷ್ಟೆ ಪ್ರದರ್ಶಿಸಿದ್ದಾರೆ. ಹೌದು. ಜೋರ್ಡಾನ್ ನಲ್ಲಿ ಈ ಘಟನೆ ನಡೆದಿದ್ದು 36 ವರ್ಷ ಪ್ರಾಯದ ಹನಾನ್ ಮಹಮೂದ್ ಅಬ್ದುಲ್ ಕರೀಂ ಎಂಬ ಮಹಿಳೆ ಅಮ್ಮಾನ್‌ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಳೆದ ಎಪ್ರಿಲ್ 24ರಂದು ಸಿಸೇರಿಯನ್ ಹೆರಿಗೆಯನ್ನು ಮಾಡಿಸಿಕೊಂಡಿದ್ದು ಆಕೆ ಮತ್ತು ಮಗು ಆರೋಗ್ಯವಾಗಿ ಮನೆ ಸೇರಿದ್ದರು. […]
↧